   ಮೂಲದೊಡನೆ ಪರಿಶೀಲಿಸಿ

ಕೊಂಕಣಿ ಭಾಷೆ

ಕೊಂಕಣಿ ಕರಾವಳಿಯ ಜನ ಆಡುವ ಮಾತೇ ಕೊಂಕಣಿ. ಇಂದಿನ ಪಶ್ಚಿಮ ಕರಾವಳಿಯನ್ನು ಹಿಂದೆ ಕೊಂಕಣಿ ಕರಾವಳಿ ಎಂದು ಕರೆಯುತ್ತಿದ್ದರು. ಈ ಪ್ರದೇಶ ಉತ್ತರದ ಕಾಠಿಯಾವಾಡದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಪಸರಿಸಿಕೊಂಡಿತ್ತು. ಇದು ಪ್ರಾಯಶಃ ಸಪ್ತವಿಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದಿರಬೇಕು. ಕಾರಣ ಇದನ್ನು ಸಪ್ತಕೊಂಕಣ ಎಂದು ಕರೆಯುವುದೂ ರೂಢಿಯಲ್ಲಿತ್ತು. ಸ್ಕಂದ ಪುರಾಣದ ಸಹ್ಯಾದ್ರಿಕಾಂಡದಲ್ಲಿರುವ ಉಲ್ಲೇಖದ ಪ್ರಕಾರ ಕೊಂಕಣದ ಸಪ್ತಭಾಗಗಳ ಹೆಸರು ಇಂತಿವೆ: 1 ಬರ್ಬರ, 2 ಸೌರಾಷ್ಟ್ರ, 3 ಕೊಂಕಣ, 4 ಕರ್ಹಾಟ, 5 ಕರ್ಣಾಟ, 6 ತುಲಂಗ, 7 ಕೇರಳ.
ಸದ್ಯಕ್ಕೆ ಭಾರತದ ಪಶ್ಚಿಮ ತೀರದಲ್ಲಿ ಮಹಾರಾಷ್ಟ್ರದ ಠಾಣೆ, ಕೊಲಾಬಾ ಮತ್ತು ರತ್ನಾಗಿರಿ ಜಿಲ್ಲೆಗಳನ್ನೂ ಗೋವವನ್ನೂ ಒಳಗೊಂಡ ಪ್ರದೇಶವನ್ನು ಸ್ಥೂಲವಾಗಿ ಕೊಂಕಣ ಎಂದು ಕರೆಯುವುದಿದೆ.			(ನೋಡಿ- ಕೊಂಕಣ)

ಶಕವರ್ಷ 956 ಅರ್ಥಾತ್ ಕ್ರಿ.ಶ.1034ರ ಸುಮಾರಿನ ಒಂದು ಶಾಸನದಲ್ಲಿ ಚಾಳುಕ್ಯ ಅರಸನಾದ ಮೂರನೆಯ ಜಯಸಿಂಹ ಸಪ್ತಕೊಂಕಣವನ್ನು ಜಯಿಸಿಕೊಂಡನೆಂಬ ಉಲ್ಲೇಖ ಬಂದಿದೆ. ಪುರಾಣದಲ್ಲಿ ಈ ಪ್ರದೇಶವನ್ನು ಪರಶುರಾಮ ಕ್ಷೇತ್ರವೆಂದು ಹೇಳಿದೆ. ಪರಶುರಾಮ ಕೊಡಲಿಯನ್ನೆಸೆದು ಸಮುದ್ರವನ್ನು ಆಪಹಿಂದಕ್ಕೆ ಸರಿಸಿ ಕೊಂಕಣ ಪ್ರದೇಶವನ್ನು ಸೃಷ್ಟಿಸಿದನೆಂದು ಪ್ರತೀತಿ.
ಬ್ರಾಹ್ಮಣಭಾಷೆ, ಕೆನರಾಭಾಷೆ, ಗೋವಾ ಬ್ರಾಹ್ಮಣರ ಭಾಷೆ ಮುಂತಾಗಿ ಕೊಂಕಣಿ ಭಾಷೆಗೆ ಅನೇಕ ಹೆಸರುಗಳು ಕಂಡುಬರುತ್ತದೆ. ಕೊಂಕಣಿ ಎಂಬ ಹೆಸರು ಹೇಗೆ ಉತ್ಪನ್ನವಾಯಿತು ಎಂಬುದರ ಬಗ್ಗೆ ಹಲವಾರು ಪ್ರಮೇಯಗಳಿವೆ. ಹೆಚ್ಚಾಗಿ ಕಲ್ಪನೆಯನ್ನೆ ಅವಲಂಬಿಸಿರುವುದರಿಂದ ಅವನ್ನಿಲ್ಲಿ ಕೈಬಿಡಲಾಗಿದೆ. ಸ್ಥೂಲವಾಗಿ ಹೇಳುವುದಾದರೆ ಕೊಂಕಣ ನಾಡಿನ ಭಾಷೆಯೇ ಕೊಂಕಣಿ. ಆಡುಮಾತಿನಲ್ಲಿದು ಕೊಂಕ್ಣಿ ಆಗಿದೆ. ಗೋವೆಯೇ ಈ ಭಾಷೆಯ ತವರುಮನೆಯೆಂದು ತಿಳಿದು ಅದನ್ನು ಗೋವೆಯ ಭಾಷೆ ಅಥವಾ ಗೋಮಾಂತಾಕೀ ಎಂದು ಕರೆಯುವ ಬಳಕೆಯೂ ಉಂಟು.

ಕೊಂಕಣಿಯ ವ್ಯಾಪ್ತಿ: ಗೋವೆ, ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ, ಕೇರಳ ಮೊದಲಾದೆಡೆಗಳಲ್ಲಿಯೂ ಕೊಂಕಣಿ ವ್ಯಾಪಿಸಿಕೊಂಡಿದೆ. 1961ನೆಯ ಜನಗಣತಿಯ ಪ್ರಕಾರ ಕೊಂಕಣಿ ಭಾಷೆಯನ್ನು ಬಳಸುವವರ ಸಂಖ್ಯೆ 13,52,363.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ತರಗತಿಯ ಹಾಗೂ ಕೆಳತರಗತಿಯ ಹಿಂದೂ ಸಮಾಜದಲ್ಲಿ ಕೊಂಕಣಿಗೆ ಮಾತೃಭಾಷಾಸ್ಥಾನವುಂಟು. ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊಂಕಣಿ ಸಾರಸ್ವತ ಬ್ರಾಹ್ಮಣರ ಭಾಷೆ ಮಾತ್ರವಲ್ಲದೆ ಕ್ರೈಸ್ತರ ಭಾಷೆಯೂ ಆಗಿದೆ. ಅವರು ಅದನ್ನು ಮನೆಬಳಕೆಗೆ ಮಾತ್ರ ಸೀಮಿತವಾಗಿ ಇರಿಸದೆ ಇಗರ್ಜಿ, ಧ್ಯಾನಮಂದಿರ ಮುಂತಾದೆಡೆಗಳಲ್ಲಿಯೂ ಸಾಮಾಜಿಕ ಹಾಗೂ ಧಾರ್ಮಿಕ ವ್ಯವಹಾರಗಳಲ್ಲಿಯೂ ಬಳಸುತ್ತಾರೆ.
ಗೆರ್ಸೊಂ ದಕುಂಞÁ ಜೊನ್ ವಿಲ್ಸನ್, ಮೊನ್ಸಿಞೂರ್ ಎಸ್, ಆರ್, ದಾಲ್ಗಾದೊ, ಆರ್ಥರ್ ಸಿ. ಬರ್ನೆಲ್, ಫೆರ್ನಾಂದೊ ಲೆಯಲ್, ಸುನೀತಿಕುಮಾರ್ ಚಟರ್ಜಿ, ಸುಮಿತ್ರ ಮಂಗೇಶ್ ಕತ್ರೆ ಮೊದಲಾದ ಭಾಷಾತಜ್ಞರ ಅಭಿಪ್ರಾಯದಂತೆ ಕೊಂಕಣಿ ಮರಾಠಿಯಿಂದ ಹುಟ್ಟಲೂ ಇಲ್ಲ. ಅದು ಮರಾಠಿಯ ಉಪಭಾಷೆಯೂ ಅಲ್ಲ. ಅವೆರಡರ ಶಬ್ದ ಭಂಡಾರದಲ್ಲಿಯೂ ಧ್ವನಿಮಾ ವ್ಯವಸ್ಥೆಯಲ್ಲಿಯೂ ವ್ಯಾಕರಣದಲ್ಲಿಯೂ ಮೂಲ ವ್ಯತ್ಯಾಸಗಳಿದ್ದು ಅವು ಪರಸ್ಪರ ಅರ್ಥಮಾಡಿಕೊಳ್ಳಲು ಸುಲಭ ಸಾಧ್ಯವಲ್ಲವಾದುದರಿಂದ ಅವು ಎರಡು ಭಿನ್ನ ಸ್ವತಂತ್ರ ಭಾಷೆಗಳು, ಮಹಾಜನ ನಿಯೋಗ ಕೂಡ ಕೊಂಕಣಿಯ ಸ್ವತಂತ್ರ ಅಸ್ತಿತ್ವವನ್ನು ಒಪ್ಪಿದೆ.

1961ನೆಯ ಇಸವಿಯ ಜನಗಣತಿಯಲ್ಲಿ ಕೊಂಕಣಿಯ ಉಪಭಾಷೆಗಳ ಯಾದಿಯನ್ನು ಈ ರೀತಿಯಲ್ಲಿ ಕೊಡಲಾಗಿದೆ. ಭಟ್ಕಳ, ಚೆಟ್ಟಿಭಾಷಾ-ಕೊಂಕಣಿ, ದಾಲ್ದಿ, ಫಿರಂಗಿ, ಗೋವನೀಸ್, ಗೌಡಪ್ರಾಕೃತ, ಗೌಡಸಾರಸ್ವತ, ಕಾಂಗೊಣಿ, ಕಾರ್ವಾರಿ, ಖೊಕಿಲಿ, ಕೊಂಕಣಿ, ಕೊರ್ಲಾಣಿ, ಕುಡುಬಿ, ಮೋಪಣ್, ನವಾಯತ.

ಗೋವೆಯ ಕೊಂಕಣಿಯಲ್ಲಿ ಪೋರ್ಚುಗೀಸ್ ಪ್ರಭಾವ ಹೆಚ್ಚು. ಕರ್ಣಾಟಕದ ಕೊಂಕಣಿಯಲ್ಲಿ ದ್ರಾವಿಡ ಭಾಷೆಗಳ ಪ್ರಭಾವ ಎದ್ದುಕಾಣುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ತುಳು ಹಾಗೂ ಕನ್ನಡ ಪ್ರಭಾವ ಸಾರಸ್ವತ ಹಾಗೂ ಗೌಡಸಾರಸ್ವತ ಕೊಂಕಣಿಯಲ್ಲಿ ಕಾಣುವಷ್ಟು ಕ್ರೈಸ್ತ ಕೊಂಕಣಿಯಲ್ಲಿ ಕಾಣುವುದಿಲ್ಲ.

ಕೊಂಕಣಿ ಭಾಷೆಯ ರೂಪ-ರೇಖೆ: ಧ್ವನಿಮಾಗಳು: ಕೊಂಕಣಿಯಲ್ಲಿ ಎಂಟು ಸ್ವರಗಳೂ ಇಪ್ಪತ್ತೆರಡು ವ್ಯಂಜನಗಳೂ ಅಲ್ಲದೆ ದೀರ್ಘತೆ ಹಾಗೂ ಅನುನಾಸಿಕತೆಗಳೂ ಧ್ವನಿಮಾಗಳಾಗಿವೆ.

ಸ್ವರಗಳು:

ಪೂರ್ವ
ಮಧ್ಯ
ಪಶ್ಚ

ಉನ್ನತ
ಉನ್ನತ-ಮಧ್ಯ
ನಡು-ಮಧ್ಯ
ಅವನತ-ಮಧ್ಯ
ಅವನತ

e

ಚಿ
u
o

ಸ್ವರಗಳ ದೀರ್ಘರೂಪಕ್ಕೆ ಉದಾಹರಣೆಗಳು:
	ಣiಞ 	ಹರಳು	ಣi : ಞ	ಖಾರ	ii
	ಠಿeಟಿಜ	ನೊರೆ	ಠಿe:ಟಿóಜ	ಹಿಂಡಿ	ee
ಸ್ವರಗಳ ಅನುನಾಸಿಕತೆಗೆ ಉದಾಹರಣೆಗಳು:
ಣi : ಟಿ 	ಮೂರು	 	ಅವರು	 i	ಇವಳು
bi 	ಬೀಜ	   ಬಿತ್ತು	   ಇವರು(ಸ್ತ್ರೀ)
ವ್ಯಂಜನಗಳು

ಓಷ್ಠ್ಯ
ದಂತ್ಯೋಷ್ಠ್ಯ
ದಂತ್ಯ
ವತ್ಸ್ರ್ಯ್
ಪರಿವೇಷ್ಠಿತ
ತಾಲವ್ಯ
ಕಂಠ್ಯ
ಗಲಕುಹರ

ಸ್ಪರ್ಶ
ಘರ್ಷ
ಅನುನಾಸಿಕ
ಕಂಪಿತ
ಪಾಶ್ರ್ವಿಕ
ಅರೆ ವ್ಯಂಜನ
ಠಿb

m

ತಿ

~
m
ಣó ಜ

s
u
ಡಿ
ಟ
ಣ óಜ
ಟಿ
.
ಟ
.
ಛಿರಿ
s'

ಥಿ
ಞg
h

	ಗೋವೆಯಿಂದ ದಕ್ಷಿಣಕ್ಕೆ ಬಂದಂತೆ ಅದರಲ್ಲಿಯೂ ಮಂಗಳೂರಿನ ಕ್ರೈಸ್ತ ಕೊಂಕಣಿಯಲ್ಲಿ ಮಹಾಪ್ರಾಣ ಅದೃಶ್ಯವಾಗುತ್ತ ಬಂದಿದೆ. ಉತ್ತರದ ಕೊಂಕಣಿಯಲ್ಲಿ ಸ್ವರಾಂತ್ಯಪದಗಳೇ ಹೊರತು ವ್ಯಂಜನಾಂತಗಳಿಲ್ಲ. ಆದರೆ ಕಾರವಾರದಿಂದ ದಕ್ಷಿಣಕ್ಕೆ ಬಂದಂತೆ ಕಡೆಯ u-ಕಾರ ವಿವೃತಗೊಂಡು ಆ ಶಬ್ದಗಳು  ಎಂದು ಉಚ್ಚಾರಗೊಳ್ಳುತ್ತವೆ. ಮಂಗಳೂರು ಕ್ರೈಸ್ತ ಕೊಂಕಣಿಯಲ್ಲಿ ಅವು ವ್ಯಂಜನಾಂತಗಳಾಗುತ್ತವೆ.  ಮತ್ತು  ಗಳಿಗೆ ಎರಡು ಉಚ್ಚಾರಗಳಿವೆ. ಈ ವ್ಯಂಜನಗಳ ಮುಂದೆ ಮಧ್ಯ ಅಥವಾ ಪಶ್ಚ ಸ್ವರಗಳೇ ಬಂದರೆ ಅವು ಕ್ರಮವಾಗಿ  ಎಂದು ಉಚ್ಚಾರವಾಗುತ್ತವೆ. ಇತರೆಡೆಗಳಲ್ಲಿ  ಮತ್ತು  ಗಳಾಗಿ ಉಳಿಯುತ್ತವೆ.  ಕೊಳೆ  ತಪ್ಪು  ಯೇಸು.

	ನಾಮಪದಾಕೃತಿಮಾಗಳು: ಯಾವ ಆಕೃತಿಮಾಗಳು ವಚನಪ್ರತ್ಯಯಗಳನ್ನು ಸ್ವೀಕರಿಸುತ್ತವೆಯೋ ಅವು ಕೊಂಕಣಿಯಲ್ಲಿ ನಾಮಪದಾಕೃತಿಮಾಗಳು. ಅವುಗಳಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗಗಳೆಂದು ಮೂರು ವರ್ಗಗಳು ಅಥವಾ  (ಶೂನ್ಯ) ಬಹುವಚನ ಪ್ರತ್ಯಯವನ್ನು ಸ್ವೀಕರಿಸುವಂಥವುಗಳು ಪುಲ್ಲಿಂಗ ಅಥವಾ  ಪ್ರತ್ಯಯವನ್ನು ಸ್ವೀಕರಿಸುವಂಥವು ಸ್ತ್ರೀ ಲಿಂಗ;  ಅಥವಾ  ಪ್ರತ್ಯಯವನ್ನು ಸ್ವೀಕರಿಸುವಂಥವು ನಪುಂಸಕಲಿಂಗ ವರ್ಗಕ್ಕೆ ಸೇರಿದವು.

	ಕೊಂಕಣಿಯಲ್ಲಿ ಲಿಂಗಭೇದ ರೂಪವನ್ನು ಹೊಂದಿಕೊಂಡಿದೆ, ಅರ್ಥವನ್ನಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಏಕೆಂದರೆ ಇಲ್ಲಿ ಕುದುರೆ ಪುಲ್ಲಿಂಗ; ಕೋಗಿಲೆ, ಏಡಿ, ಕಿತ್ತಳೆ-ಇವು ಸ್ತ್ರೀಲಿಂಗ, ಹುಡುಗಿ ನಪುಂಸಕಲಿಂಗ.

	ಕಾರಕಗಳು-ಪ್ರತ್ಯಯಗಳು : ಸಂಬೋಧನಾ, ಕರಣ, ಸಂಪ್ರಧಾನ, ಸಂಬಂಧ, ಅಧಿಕರಣ-1, ಅಧಿಕರಣ-2, ಅಪಾದಾನ-ಎಂಬವು ಕೊಂಕಣಿಯಲ್ಲಿ ಕಾರಕಗಳು. ಅವನ್ನು ಸೂಚಿಸಲು ಸಕ್ರಮವಾಗಿ ಏಕವಚನದಲ್ಲಿ  ಪ್ರತ್ಯಯಗಳನ್ನು ಸೇರಿಸಿದರೆ ಬಹುವಚನದಲ್ಲಿ  ಸೇರಿಸಬೇಕು. ಸಂಬಂಧಕಾರಕವನ್ನು ಕೆಲವೆಡೆ  ಎಂಬ ಪ್ರತ್ಯಯದಿಂದ ಸೂಚಿಸುವುದೂ ಉಂಟು.

	ಕ್ರಿಯಾಪದಾಕೃತಿಮಾಗಳಲ್ಲಿ ಸಕರ್ಮಕ, ಅಕರ್ಮಕಗಳೆರಡೂ ಇವೆ. ವರ್ತಮಾನದಲ್ಲಿ ಲಿಂಗಭೇದ ಸೂಚಿತವಾಗುವುದಿಲ್ಲ, ಭೂತಕಾಲದಲ್ಲಿ  ಮಲಗಿದೆ  ಮಲಗುತ್ತಿದ್ದೆ  ಮಲಗಿದ್ದೇನೆ  ಮಲಗಿದ್ದೆ-ಈ ನಾಲ್ಕು ಬಗೆಯನ್ನೂ ತಿಳಿಸಲು ಅವಕಾಶವಿದೆ.

	ವಾಕ್ಯರಚನೆ: ಕೊಂಕಣಿ ವಾಕ್ಯದಲ್ಲಿ (ನಾಮವಿಶೇಷಣ)-ಕರ್ತೃಪದ-ಕ್ರಿಯಾ ವಿಶೇಷಣ)-ಕ್ರಿಯಾಪದ ಈ ಪದಾನುಕ್ರಮಣಿಕೆಯನ್ನು ಕಾಣುತ್ತೇವೆ. ನಾನು ಧಾರವಾಡದಿಂದ ದೂದ್ ಪೇಡೆಯನ್ನು ತಂದಿದ್ದೇನೆ. ವಿಶೇಷಾರ್ಥವನ್ನು ಸೂಚಿಸುವುದಕ್ಕಾಗಿ ಪದಾನುಕ್ರಮಣಿಕೆಯಲ್ಲಿ ಬದಲಾವಣೆಯನ್ನು ಮಾಡುವುದುಂಟು. ಧಾರವಾಡದಿಂದ ನಾನು ದೂದ್‍ಪೇಡೆಗಳನ್ನು ತಂದಿದ್ದೇನೆ. ಗೋವೆಯ ಕೊಂಕಣಿಯಲ್ಲಿ ಪೋರ್ಚುಗೀಸ್ ಪ್ರಭಾವದಿಂದ ವ್ಯಾಕರಚನಾಕ್ರಮದಲ್ಲಿ ಅಲ್ಲಲ್ಲಿ ಬದಲಾವಣೆಯಾಗಿದೆ.

	ಕೊಂಕಣಿಯ ರೂಪವನ್ನು ಪರಿಶೀಲಿಸಿದರೆ ಅದು ಗುಜರಾತಿ, ಮರಾಠಿಗಳೊಡನೆ ಜಾನಾಂಗಿಕ ಸಂಬಂಧವನ್ನು ಇಟ್ಟುಕೊಂಡಿದೆ ಎಂದು ತಿಳಿದುಬರುತ್ತದೆ. ವ್ಯಾಕರಣವನ್ನು ಗಮನದಲ್ಲಿಟ್ಟರೆ ಕೊಂಕಣಿಗೆ ಸ್ವತಂತ್ರ ಅಸ್ತಿತ್ವ ಇದೆಯೆಂದು ಖಚಿತವಾಗುತ್ತದೆಂದು ಕತ್ರೆಯವರು ಕೊಂಕಣಿಯ ಬಗ್ಗೆ ಭಾಷಾವೈಜ್ಞಾನಿಕ ಅಧ್ಯಯನ ನಡೆಸಿ ತಮ್ಮ ನಿರ್ಧಾರವನ್ನು ಸೂಚಿಸಿದ್ದಾರೆ. 
											(ಡಬ್ಲ್ಯು.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ